"ಹೋಟೆಲ್ ಕ್ಯಾಲಿಫೋರ್ನಿಯಾ" ಈಗಲ್ಸ್ ವಾದ್ಯಗೋಷ್ಠಿಯ ಇದೇ ಹೆಸರಿನ ಧ್ವನಿಸುರುಳಿಯ ಶೀರ್ಷಿಕೆ ಗೀತೆ ಮತ್ತು ಇದನ್ನು ಫೆಬ್ರವರಿ ೧೯೭೭ರಲ್ಲಿ ಬಿಡುಗಡೆ ಮಾಡಲಾಯಿತು. ಅದು ಧ್ವನಿಸುರುಳಿ ಉದ್ದೇಶಿತ ರಾಕ್ ಅವಧಿಯ ಅತ್ಯಂತ ಪರಿಚಿತವಾಗಿದ್ದ ಗೀತೆಗಳಲ್ಲೊಂದು. ಗೀತೆಯ ಸಾಹಿತ್ಯವನ್ನು ಡಾನ್ ಫ಼ೆಲ್ಡರ್, ಡಾನ್ ಹೆನ್ಲಿ ಮತ್ತು ಗ್ಲೆನ್ ಫ಼್ರೇ ಬರೆದಿದ್ದಾರೆ. ಹೆನ್ಲೆಯವರು ಈ ಹಾಡಿನ ಪ್ರಮುಖ ಗಾಯಕರು. ಈ ಹಾಡಿನಲ್ಲಿ ಅವರು, ಜೋ ವಾಲ್ಷ್ ಮತ್ತು ಫೆಲ್‍ಡರ್ ಗಿಟಾರ್ ವಾದ್ಯವನ್ನು ನುಡಿಸಿದ್ದಾರೆ. == ಉಲ್ಲೇಖಗಳು ==